Current Date 26 Aug, 2026

ಬಾಯ್‌ಫ್ರೆಂಡ್ ಜೊತೆ ಬ್ರೇಕಪ್, 'ಅಮ್ಮ ಮದುವೆ ಆಗ್ಲೇಬೇಡ ಅಂತಾರೆ' ಎಂದ ಮಾರಿಮುತ್ತು ಮೊಮ್ಮಗಳು ಜಯಶ್ರೀ..!

ಪ್ರೀತಿ ಎಂಬ ಪದ ಸುಂದರ ಇರಬಹುದು. ಆದರೆ ಪ್ರೀತಿಯಲ್ಲಿ ಒಮ್ಮೊಮ್ಮೆ ನೋವಾಗುತ್ತೆ. ಹೀಗೆ ಆದ ನೋವು ಒಮ್ಮೊಮ್ಮೆ ಸಹಿಸಿಕೊಳ್ಳಲು ಸಾಧ್ಯವಾಗಲ್ಲ. ಇನ್ನೂ.. ಎಲ್ಲಾ ಉತ್ಸಾಹ, ಆಸಕ್ತಿ ಮತ್ತು ಖುಷಿಯ ಕ್ಷಣಗಳನ್ನು ಕಸಿದುಕೊಳ್ಳುವ ಬ್ರೇಕ್‌ ಅಪ್‌ನ ನೋವು ಸಹಿಸಿಕೊಳ್ಳುವುದಕ್ಕೆ ಅನೇಕರಿಂದ ಸಾಧ್ಯವಾಗುವುದಿಲ್ಲ. ಯಾಕೆಂದರೆ ದೇಹಕ್ಕೆ ಆದ ಗಾಯವಾದರೂ ಹೇಗೊ ಮರೆತು ಬಿಡಬಹುದು. ಆದರೆ ಮನಸಿಗೆ ಆದ ಗಾಯ ಮರೆಯಲು ಸಾಧ್ಯವಾಗಲ್ಲ. ಇದಕ್ಕೆ ಜಯಶ್ರೀ ಆರಾಧ್ಯ ಸದ್ಯದ ಉದಾಹರಣೆ.

ಹೌದು, ಜಯಶ್ರೀ ಆರಾಧ್ಯ.. ಮಾರಿಮುತ್ತು ಮೊಮ್ಮಗಳು. ಪುಟ್ಟರಾಜು ಲವರ್ ಆಫ್ ಶಶಿಕಲಾ' ಚಿತ್ರದ ಮೂಲಕ ನಾಯಕಿಯಾಗಿ ಕನ್ನಡಿಗರಿಗೆ ಪರಿಚಯವಾದ ಜಯಶ್ರೀ ಸದ್ಯ ತಮ್ಮ ಬಹುಕಾಲದ ಪ್ರಿಯಕರ ಸ್ಟೀವನ್ ಜೊತೆ ಸಂಬಂಧ ಕಡೆದುಕೊಂಡಿದ್ದಾರೆ. ಪ್ರೀತಿಯಲ್ಲಿ ನೊಂದು ಬೆಂದು ಹೋಗಿದ್ದಾರೆ.ಇಂಥಾ ಜಯಶ್ರೀ ಈಗ ಮದುವೆಯ ವಿಚಾರದ ಕುರಿತು ಮನ ಬಿಚ್ಚಿ ಮಾತನಾಡಿದ್ದಾರೆ. ಅಮ್ಮ ನನಗೆ ಮದ್ವೆ ಆಗ್ಲೇಬೇಡ ಎನ್ನುತ್ತಾರೆ ಎಂದು ಹೇಳಿದ್ದಾರೆ.